ನೀವು ಮಾಡಿದ್ದೆಲ್ಲ ಇಷ್ಟೇ!
ಆಗತಾನೆ ಅರಳಿ ತಮ್ಮ ಸುತ್ತಮುತ್ತ ಗಾಳಿಗೆ ಕಂಪು ಬೀರುತ್ತಿದ್ದ ಹೂಗಳ ಕತ್ತು ಕುಯ್ದು ನಿಮ್ಮ ದೇವರ ಕೊರಳಿಗೆ ನೇತು ಹಾಕಿದಿರಿ, ಅಲಂಕಾರ ಮಾಡಿದಿರಿ. ನಿಮ್ಮ ಕಿವಿಗಳಿಗೆ ಹೂಗಳ ಆರ್ತನಾದ ಕೇಳಲಿಲ್ಲ. ನಿಮ್ಮ ಕಂಗಳಿಗೆ ಅವುಗಳನ್ನು ತಮ್ಮ ತಾಯಿ ಕೊಂಬೆಯ ಮಡಿಲಲ್ಲೇ ನೋಡಿ ಆನಂದಿಸುವ ಸಂವೇದನೆ ಉಳಿಯಲಿಲ್ಲ. ನೀವು ಮಾಡಿದ್ದೆಲ್ಲ ಇಷ್ಟೇ. ಸ್ವಚ್ಛಂದವಾಗಿ ಅಲೆದು, ಹುಲ್ಲು ಮೇಯ್ದು, ತನ್ನ ಕರುವಿಗಾಗಿ ಹಾಲು ತುಂಬಿಕೊಂಡು ಬರುವ ಕೆಚ್ಚಲನ್ನು ಹಿಸುಕಿ ಹಿಂಡಿ ನಿಮ್ಮ ಕಲ್ಲು ದೇವರುಗಳ ನೆತ್ತಿಯ ಮೇಲೆ ಹಾಲು, ಮೊಸರು, ತುಪ್ಪ ಸುರಿದು ಅಭಿಷೇಕವೆಂದಿರಿ. ಅವು ಹಸಿದವರಿಗೆ ಹೊಟ್ಟೆ ತುಂಬಿಸಲಿಲ್ಲ. ನೀವು ನಿಮ್ಮ
This is all you have done
You slit the necks of flowers that had just bloomed and were spreading their fragrance into the air around them, and hung them around the necks of your gods, decorating them. Your ears could not hear the anguished cries of the flowers. Your eyes had lost the sensitivity to rejoice in seeing them blooming in the lap of the very branches that had nurtured them. This is all you have done. You squeezed and milked the udders of the cow that wandered freely, grazed on grass, and re











