top of page
Search

ಏನೂ ಅಲ್ಲದ ರಾಧೆ.. ಎಲ್ಲವೂ ಆಗುವ ರಾಧೆ

  • Harsha
  • Dec 27, 2020
  • 2 min read

ಲೋಕದ ಕಣ್ಣಿಗೆ ರಾಧೆಯು ಕೂಡ

ಎಲ್ಲರಂತೆ ಒಂದು ಹೆಣ್ಣು

ನನಗೋ ಆಕೆ ಕೃಷ್ಣನತೋರುವ

ಪ್ರೀತಿಯು ನೀಡಿದ ಕಣ್ಣು


ನನ್ನ ನೆಚ್ಚಿನ ಕವಿ ಡಾ.H S ವೆಂಕಟೇಶ ಮೂರ್ತಿಯವರು ಬರೆದ ಗೀತೆಯ ಸಾಲುಗಳಿವು.


ರಾಧೆ ಇರದಿದ್ದರೆ ಕೃಷ್ಣ ಅದೆಷ್ಟು ನಿಸ್ಸಾರನಾಗುತ್ತಿದ್ದ. ಅವನು ಬರೀ ತುಂಟತನ ಮಾಡುವಒಬ್ಬ ಸಾಮಾನ್ಯ ಬಾಲಕನಾಗಿಬಿಡುತ್ತಿದ್ದ, ಪವಾಡಮಾಡುವ ಒಬ್ಬ ಕಿಶೋರನಾಗಿಬಿಡುತ್ತಿದ್ದ. ರಾಕ್ಷರನ್ನು ವಧಿಸುವಒಬ್ಬ ಸಾಮಾನ್ಯ ಯೋಧ, ಧರ್ಮಬೋಧಿಸುವ ಒಬ್ಬ ಸಾಮಾನ್ಯ ಗುರುವಾಗಿಬಿಡುತಿದ್ದ. ಆದರೆ ಒಬ್ಬ ರಾಧೆಯೇ ನಿಜವಾದಕೃಷ್ಣನನ್ನು ಲೋಕಕ್ಕೆ ತೋರಿದ್ದು. ರಾಧೆಇಲ್ಲದಿದ್ದರೆ ಕೃಷ್ಣ ದೇವರಾಗಿಬಿಡುವ ಅಪಾಯವಿತ್ತು. ಆದರೆ ಕೃಷ್ಣನನ್ನು ಮನುಷ್ಯನಾಗಿ ಹಿಡಿದಿಟ್ಟಿದ್ದು ರಾಧೆ. ಹಾಗೆ ಮನುಷ್ಯನಾಗಿರದಿದ್ದರೆಕೃಷ್ಣ ನಮಗೆ ಇಷ್ಟು ಅರ್ಥವಾಗುತ್ತಿರಲಿಲ್ಲ.

ನನ್ನ ಪಾಲಿಗೆ ರಾಧೆ ಒಬ್ಬಸಂಪೂರ್ಣ ಹೆಣ್ಣು. ಗರ್ಭಧರಿಸದೇ ಆಗುವ ತಾಯಿ, ಮದುವೆಆಗದೆಯೇ (ಬಹುಶಃ ಆಗದೇ ಇದ್ದುದರಿಂದಲೇ) ಆದ ಸಂಗಾತಿ, ಅಕಾರಣವಾಗಿ ಪ್ರೀತಿಸಬಲ್ಲಪ್ರೇಮಿ, ದಿಕ್ಕು ತಪ್ಪಿದಾಗ ದಾರಿತೋರುವ ಗೆಳತಿ - ರಾಧೆ ಕೃಷ್ಣನಿಗೆಎಲ್ಲವೂ ಆಗುತ್ತಾಳೆ. ಮೇಲ್ನೋಟಕ್ಕೆ ರಾಧೆಯಲ್ಲಿನ ಪ್ರೀತಿಯನ್ನು ಕೃಷ್ಣ ಸಂಸ್ಕರಿಸುತ್ತಾ ಹೋದಂತೆಕಂಡರೂ, ರಾಧೆಯೇ ಕೃಷ್ಣನ ವ್ಯಕ್ತಿತ್ವಕ್ಕೆಪ್ರೀತಿಯನ್ನು ಬೆರೆಸಿ ಜೀವಂತಗೊಳಿಸಿದ್ದು. ರಾಧೆಯ ಕೊಳಲ ಮೂಲಕವೇ ಕೃಷ್ಣನ ಉಸಿರು ಸಂಗೀತವಾಗುವುದು. ರಾಧೆಯನ್ನು ಅರ್ಥಮಾಡಿಕೊಳ್ಳದೆ ನಮಗೆ ಕೃಷ್ಣ ಅರ್ಥವಾಗುವುದಿಲ್ಲ.


ನಾನು, ನನ್ನದು ನನ್ನವರೆನ್ನುವ ಹಲವುತೊಡಕುಗಳ ಮೀರಿ

ಧಾವಿಸಿಸೇರಲು ಬೃಂದಾವನವ ರಾಧೆ ತೋರುವಳು ದಾರಿ

ಪ್ರೀತಿನಮ್ಮ ಅಹಂಕಾರವನ್ನು ಮೀರದಿದ್ದರೆ, ಆ ಅಹಂಕಾರವನ್ನು ಮುರಿದುಒಂದು ಸರಿಯಾದ ಆಕಾರಕ್ಕೆ ತರದೇಇದ್ದರೆ ಅದು ಪ್ರೀತಿಯಾಗುವುದಿಲ್ಲ. ರಾಧೆಅಂಥದೊಂದು ಪ್ರೀತಿಯನ್ನು ತೋರಿದ, ಬಯಸಿದ, ಹೇಳಿಕೊಟ್ಟಮತ್ತು ಸಾಧಿಸಿದ ಹುಡುಗಿ. 'ನಾನು' ಎನ್ನುವ ಅಹಂಕಾರವನ್ನು ಮುರಿದ ರಾಧೆ, ಪ್ರಪಂಚದರೀತಿ-ರಿವಾಜುಗಳನ್ನು ಮೀರಿ ಬೃಂದಾವನಕ್ಕೆ ಕೃಷ್ಣನನ್ನುಕರೆತರುವ ಪ್ರೀತಿ ರಾಧೆ.


ಹಾಗೆಂದುರಾಧೆ ವಯಸ್ಸು ಮೀರಿದ ಪ್ರೌಢತೆಹೊಂದಿದವಳಲ್ಲ. ಬೇರೆ ಗೋಪಿಯರೊಂದಿಗೆ ಕೃಷ್ಣಸಲುಗೆಯಿಂದಿದ್ದರೆ ಈರ್ಷ್ಯೆಗೆ ಒಳಗಾಗುವ, ಕೃಷ್ಣಾ 'ನನ್ನೊಬ್ಬಳಿಗೆ' ಮಾತ್ರಸೇರಿದವನು' ಎಂದು ನಂಬುವ, 'ನನ್ನೊಬ್ಬಳಿಗೆಮಾತ್ರ ಇರಬೇಕು' ಎಂದು ಬಯಸುವ, 'ನನ್ನೊಬ್ಬಳಿಗೆ ತಾನೇ?' ಎಂದು ತನ್ನಲ್ಲೇಅನುಮಾನ ಹುಟ್ಟುಹಾಕಿಕೊಳ್ಳುವ, 'ನನ್ನೊಬ್ಬಳಿಗೆ ಸೇರಿದವನು' ಎಂದು ತಾನೇ ಸಮಾಧಾನಹೇಳಿಕೊಳ್ಳುವ ಎಲ್ಲರ ಹಾಗೆ ಇರುವಗೊಲ್ಲರ ಹುಡುಗಿ. ಬಹುಶಃ ಇದೇಕಾರಣಕ್ಕೆ ದೈವಾಂಶ ಇದ್ದ ಕೃಷ್ಣನನ್ನುಮನುಷ್ಯನಾಗಿ ಹಿಡಿದಿಡಲು ರಾಧೆಗೆ ಸಾಧ್ಯವಾಗಿದ್ದು.


ರಾಧೆ ಹುಟ್ಟಿಹನ್ನೊಂದು ತಿಂಗಳು ಕಣ್ಣು ತೆರೆದಿರಲಿಲ್ಲವಂತೆ. ಅಪ್ಪ ಅಮ್ಮ ಅವಳು ಕುರುಡಿಅಂದುಕೊಂಡಿದ್ದರು. ಅವಳು ಅಂಧೆಯಲ್ಲ; ಅವಳುಪ್ರೀತಿಯನ್ನು ತೋರಿದ ಕಣ್ಣು. ಮೊದಲ ಬಾರಿಗೆ ಕಣ್ಣುತೆರೆದಾಗ ಅವಳು ನೋಡಿದ್ದು ಕೃಷ್ಣನ್ನು. ಹಾಗೆ ಕೃಷ್ಣನನ್ನು ನೋಡಲೆಂದೇ ಅವಳು ಯಾರನ್ನು ನೋಡದೆಕಣ್ಣು ಮುಚ್ಚಿಕೊಂಡದ್ದು. ತೀರಾ metaphysical ಯೋಚನೆ ಇದು. ಆದರೆರಾಧೆಗೆ ಕೃಷ್ಣನ ವಿನಾ ಯಾವಭೂತ-ವರ್ತಮಾನ-ಭವಿಷ್ಯ ಇರುವುದುಬೇಕಿರಲಿಲ್ಲ.


ತಿಂಗಳ ರಾತ್ರಿ ತೊರೆಯ ಸಮೀಪಉರಿದರೆ ಯಾವುದೋ ದೀಪ

ಯಾರೋ ಮೋಹನ ಯಾವ ರಾಧೆಗೋಪಡುತಿರುವನು ಪರಿತಾಪ


ರಾಧೆಯನ್ನು 'ಆಹ್ಲಾದಿನಿ ಶಕ್ತಿ' ಎನ್ನುತ್ತಾರೆ, the pleasure potency. ಕೃಷ್ಣನಲ್ಲಿನ ಆ ಆನಂದ, ಆಹ್ಲಾದ, ಜೀವನೋತ್ಸಾಹ - ಎಲ್ಲಕ್ಕೂ ಮೂಲ ಶಕ್ತಿ ರಾಧೆಯಪ್ರೀತಿ. ಜಗತ್ತಿಗೆ ಕೃಷ್ಣಾ ಹಂಚಿದ ಪ್ರೀತಿಬಂದದ್ದು ರಾಧೆಯಿಂದ. ರಾಧೆಯ ವಿರಹದಂತೆ ಕೃಷ್ಣನೂರಾಧೆಯ ನೆನಪಲ್ಲಿ ಪರಿತಪಿಸಿದ್ದು ನಿಜ. ಮನುಷ್ಯ ಸೃಷ್ಟಿಸುವರೀತಿ-ರಿವಾಜುಗಳು ಪ್ರಕೃತಿ ಸಹಜ ಪ್ರೀತಿಗೆಎಂದೂ ಸಮನಾಗಲಾರವು ಎಂದು ತೋರಿದ್ದು ರಾಧೆಯಪ್ರೀತಿಯಿಂದಲೇ.


ಮಹಾ ಪ್ರವಾಹ.. ಮಹಾ ಪ್ರವಾಹ.. ತಡೆಯುವರಿಲ್ಲ

ಪಾತ್ರವಿರದತೊರೆ ಪ್ರೀತಿ

ಮರೆತರುತನ್ನ ಮರೆಯದು ಪ್ರಿಯನ

ರಾಧೆಯ ಪ್ರೀತಿಯ ರೀತಿ

ಇದು ರಾಧೆಯ ಪ್ರೀತಿಯ ರೀತಿ


ಗೋಪಿಕೆಯರೊಂದಿಗೆಸಲುಗೆಯಿಂದಿದ್ದರೂ ಮುನಿಸುಕೊಳ್ಳುವ ರಾಧೆ ಒಂದು ದಿನ ಕೃಷ್ಣನಿಗೆ ವಿದಾಯ ಹೇಳಲು ಸಿದ್ಧವಾಗುತ್ತಾಳೆ. ಪ್ರಪಂಚಕ್ಕೆ ಕೃಷ್ಣನನ್ನು ಅರ್ಪಿಸುವ ಕ್ಷಣ. ಕೃಷ್ಣ ತನ್ನವನುಮಾತ್ರ ಮತ್ತು ಕೃಷ್ಣ ತನ್ನವನಲ್ಲ. ಅವನ ಜೀವನದಲ್ಲಿ ಅವಳದು ನಿರ್ಧಿಷ್ಟ ಪಾತ್ರವಿಲ್ಲ. ಅವಳು ಅಮ್ಮನಲ್ಲ, ಹೆಂಡತಿಯಲ್ಲ.. ಮನಸ್ಸಿನ ಪ್ರಕಾರ ಅವಳುಎಲ್ಲವೂ ಹೌದು; ಪ್ರಪಂಚದ ಪಾಲಿಗೆಅವಳು ಏನೂ ಅಲ್ಲ. ಅವಳಪ್ರೀತಿ ಪಾತ್ರವಿರದ ತೊರೆ. ಅದು ಹೀಗೆಹರಿಯಬೇಕೆಂಬ ನಿಯಮವಿಲ್ಲ. ಅದು ಪ್ರವಾಹ!


ಮುಂದೆ ಕೃಷ್ಣ ಮಥುರೆಗೆ ಹೋದ, ರಾಧೆ ಕೊಟ್ಟ ಕೊಳಲು ಹೋಗಿಪಾಂಚಜನ್ಯವೆಂಬ ಶಂಖು ಬಂದಿತು, ರಾಧೆಗಾಗಿಇಟ್ಟುಕೊಳ್ಳುತ್ತಿದ್ದ ನವಿಲುಗರಿ ಜಾಗೆಗೆ ಕಿರೀಟ ಬಂದಿತು.. ನಮಗೆ ಕೃಷ್ಣಾ ಎಂದರೆನೆನಪಾಗುವುದು ಕೊಳಲ ಮಾಧುರ್ಯ; ಪಾಂಚಜನ್ಯದ ರಣಕಹಳೆ ನಾದವಲ್ಲ. ಸೌಂದರ್ಯವೆಂದರೆ ನವಿಲುಗರಿ; ಕಿರೀಟವಲ್ಲ. ರಾಧೇ ಬರೀ ಹೆಣ್ಣಲ್ಲ; ಕೃಷ್ಣನ ತೋರಿದ ಪ್ರೀತಿಯು ನೀಡಿದ ಕಣ್ಣು.

 
 
 

Recent Posts

See All
Let's Compare. Let's Complicate.

‘Who do you think is happier? Human beings or animals?’ asked my friend randomly. I don’t know why he gets such strange doubts. The...

 
 
 

Commentaires


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
© 2023 by Andy Decker. Proudly created with WIX.COM
bottom of page