ಮೂರು ಮೈಕ್ರೋ ಕಥೆಗಳು
- Harsha
- Sep 23, 2017
- 1 min read
ದೇವರು ಮತ್ತು ವರ

ದೇವರೊಮ್ಮೆ ಪ್ರತ್ಯಕ್ಷನಾಗಿ "ಏನು ವರ ಬೇಕು?" ಅಂತ ಕೇಳಿದ. "ನೀನು ಕೊಡುತ್ತಿರುವ ವರಗಳಿಂದ ಜನ ಸೋಮಾರಿಯಾಗುತ್ತಿದ್ದಾರೆ ಅಥವಾ ಆ ವರಗಳು ದುರುಪಯೋಗ ಆಗ್ತಿವೆ. ನಾನು ಕೇಳುವ ವರ ಒಂದೇ: ಇನ್ನು ಮುಂದೆ ಈ ವರಗಳನ್ನು ಕೊಡೋದನ್ನ ನಿಲ್ಲಿಸು" - ಅವನು ಕೇಳಿದ. "ತಥಾಸ್ತು! ಇದು ನಿನ್ನ ಕೋರಿಕೆಯಿಂದಲೇ ಮೊದಲುಗೊಳ್ಳುತ್ತದೆ!" ದೇವರು ಮಾಯವಾದ. ವರಗಳು ಮುಂದುವರೆದವು.
++++++++++++++++++++++++++++++++++++++++++++++++++++++++++++++++++++
ಪ್ಲಾಸ್ಟಿಕ್ ಸರ್ಜರಿ

"ನನ್ನ ಮುಖವನ್ನು ಯಾರೂ ಗುರ್ತು ಹಿಡಿಯದ ಹಾಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ಎಷ್ಟು ಖರ್ಚಾಗಬಹುದು?" - ಅವನು ಕೇಳಿದ. "ಐದು ಲಕ್ಷ" - ಆಸ್ಪತ್ರೆಯ ಹುಡುಗಿ ಹೇಳಿದಳು. ಮನದಲ್ಲೇ ಏನೋ ಲೆಕ್ಕಾಚಾರ ಮಾಡಿಕೊಂಡ ಮೇಲೆ ಅವನು ಹೇಳಿದ: "ಥ್ಯಾಂಕ್ಸ್. ಇನ್ನೊಂದು ಎಪ್ಪತ್ತು ಸಾವಿರ ಸಾಲ ಮಾಡಿಕೊಂಡು ಮತ್ತೆ ಬರುತ್ತೇನೆ"
*******************************************************************
Busy

"Busyನಾ?" ಅವನು ಯಾವುದೋ ಕೆಲಸದಲ್ಲಿ ಮಗ್ನನಾಗಿರುವುದನ್ನು ನೋಡಿಯೂ ಕೇಳಿದಳು.
" " - ಅವನು ಮೌನದಿಂದಿದ್ದ.
ಸ್ವಲ್ಪ ಸಮಯದ ನಂತರ ಮತ್ತೆ ಕೇಳಿದಳು. "ನಿಜ್ಜ Busyನಾ? ಉತ್ತರ ಬೇಕು" ಅವಳ ಧ್ವನಿಯಲ್ಲಿ ಸ್ವಲ್ಪ ಹಠವಿತ್ತು.
ಅವನು ಮೌನ ಮುರಿದ - "ಈಗಿಲ್ಲ. ಆಗ, ನೀನು ಮೊದಲ ಸಲ ಪ್ರಶ್ನೆ ಕೇಳಿದಾಗ busy ಇದ್ದೆ. ಆಗ ನಾನು 'ಹೌದು' ಅಂತ ಉತ್ತರ ಕೊಟ್ಟಿದ್ದರೆ ನನ್ನ ಉತ್ತರ ಸುಳ್ಳಾಗುತ್ತಿತ್ತು. ಉತ್ತರ ಕೊಡುವಷ್ಟು ಸಮಯವಿದ್ದರೆ ಅದು busy ಹೇಗೆ! 'ಇಲ್ಲ' ಅಂತ ಉತ್ತರ ಕೊಟ್ಟಿದ್ದರೂ ಅದು ಸುಳ್ಳಾಗುತ್ತಿತ್ತು. ಏಕೆಂದರೆ ನಾನಾಗ busy ಇದ್ದೆ. ಆಗ ನನ್ನ ಮೌನವೇ ನಿಜ ಮತ್ತು ಸರಿ ಉತ್ತರ ಆಗಿತ್ತು.
ಅವಳು ಹೇಳಿದಳು "ನಿನ್ನ ಮೌನ ಕೂಡ ನಿಜವಲ್ಲ. ನಿನಗೆ ನನ್ನ ಪ್ರಶ್ನೆ ಕೇಳಿಸಿಕೊಳ್ಳುವಷ್ಟು ಮತ್ತು ಅದಕ್ಕೆ ಮೌನದ ಉತ್ತರ ಕೊಡಬೇಕು ಎಂದು ಯೋಚಿಸುವಷ್ಟು ಸಮಯವಿತ್ತು. ನೀನು busy ಇರಲಿಲ್ಲ"
Recent Posts
See All‘Who do you think is happier? Human beings or animals?’ asked my friend randomly. I don’t know why he gets such strange doubts. The...
Open any social media platforms, listen to any guests who visit our houses, consult any counsellors or child specialists, eye...