top of page
Search

ವಿದಾಯ ಹೇಳುವ ಸಮಯ..

  • Harsha
  • Jun 22, 2017
  • 2 min read


ಚಲೋ ಏಕ್ ಬಾರ್ ಫಿರ್ ಸೆ ಅಜ್ನಬೀ ಬನ್ ಜಾಯೆ ಹಮ್ ದೋನೋ


ಸಾಹಿರ್ ಲುಧಿಯಾನ್ವಿ ಎಂಬ ಕವಿ ಬರೆದ ಹಳೆಯ ಹಿಂದಿ ಸಿನೆಮಾ ಹಾಡು. "ನಡೆ.. ಮತ್ತೊಮ್ಮೆ ನಾವಿಬ್ಬರೂ ಅಪರಿಚಿತರಾಗೋಣ" ಅನ್ನುವ ಅರ್ಥ. ಹಿಂದೊಮ್ಮೆ ನೀನು ಯಾರೋ, ನಾನು ಯಾರೋ. ಇಬ್ಬರು ಭೇಟಿಯಾದೆವು, ಪರಿಚಯವಾದೆವು, ಆತ್ಮೀಯತೆ-ಸ್ನೇಹ ಬೆಳೆದವು. ಪ್ರತಿ ಸಂಬಂಧ ಪ್ರೀತಿ-ಆರೈಕೆ ಜೊತೆಗೆ ಒಬ್ಬರ ಮೇಲೊಬ್ಬ ರಿಗೆ ಹಕ್ಕು ತರುತ್ತದೆ, ನಿರೀಕ್ಷೆಗಳನ್ನು (expectations) ಹುಟ್ಟುಹಾಕುತ್ತದೆ, ಮುನಿಸಿಕೊಳ್ಳುವ ಸಲುಗೆ ಬೆಳೆಸುತ್ತದೆ, You're mine ಅನ್ನುವ ಸ್ವತ್ವ (possessiveness) ಎದ್ದು ನಿಲ್ಲುತ್ತದೆ. Fine - ಇವೆಲ್ಲ ಇರದಿದ್ದರೆ ಅದು ಸಂಬಂಧ ಹೇಗಾಗುತ್ತದೆ? ಸೂರ್ಯನಿಂದ ಬೆಳಕು ಮಾತ್ರ ಬೇಕು ಬಿಸಿಲು ಬೇಡ ಎಂದರೆ ಹೇಗೆ!!?


ಇದು ಅಲ್ಲಿಗೆ ನಿಂತರೆ ಚೆಂದ. ಆದರೆ ಹಕ್ಕು ಅಧಿಕಾರ ಆಗಲು ಶುರುವಾಗುತ್ತದೆ. ನಿರೀಕ್ಷೆಗಳು compulsionಗಳಾಗುತ್ತವೆ. ಮುನಿಸು ಸಿಟ್ಟಾಗುತ್ತದೆ. Possessivenss ಅಸಹ್ಯ ಅನುಮಾನಾವಾಗಿ ಉಸಿರುಗಟ್ಟಿಸುತ್ತದೆ. ಸೂರ್ಯನ ಬೆಳಕಿಗಾಗಿ ಬಿಸಿಲನ್ನು ಒಂದು ಹಂತದವರೆಗೆ ಸಹಿಸಿಕೊಳ್ಳಬಹುದು. ಆದರೆ ಬಿಸಿಲು ಧಗೆಯಾಗುತ್ತದೆ. ಬಂಧವಾಗಿರಬೇಕಾದದ್ದು ಬಂಧನವೆನಿಸತೊಡಗುತ್ತದೆ.


It hurts to depart from the loved ones. But hurts even more to live together even after love ceases to exist.


ಸಂಬಂಧ ಉಳಿಸಿಕೊಳ್ಳಲು ಎಲ್ಲ 'ಪ್ರಯತ್ನ' ಪಡುತ್ತೇವೆ, ಕೆಲವೊಮ್ಮೆ ನಾವೇ ಕಳೆದುಕೊಳ್ಳಲು ಇಷ್ಟಪಡದೆ, ಒಮ್ಮೊಮ್ಮೆ ನಾವು ಗೌರವಿಸುವ ಯಾರದೋ ಮನಸಿಗೆ ನೋವು ಕೊಡಲು ಆಗದೆ, ಕೆಲವೊಮ್ಮೆ ಜನರು ಕೀಳಾಗಿ ನೋಡುತ್ತಾರೆ ಅನ್ನುವ ಕಾರಣಕ್ಕೆ. ಆದರೆ ಆಗಲೇ ಸತ್ತು ಹೋಗಿರುವ ಸಂಬಂಧದ ಹೆಣವನ್ನು ಎಷ್ಟು ದಿನ ಸಿಂಗರಿಸಿ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯ!!


It's time to say 'Good bye'. . ಚಲೋ ಏಕ್ ಬಾರ್ ಫಿರ್ ಸೆ.. ಆಜ್ನಬೀ ಬನ್ ಜಾಯೆ ಹಮ್ ದೋನೋ


ಆದರೆ ಸಂಬಂಧ ಎನ್ನುವುದು ನಮ್ಮ ಉದ್ಯೋಗದಂಥದ್ದಲ್ಲವಲ್ಲ, appointment letter ಕೊಟ್ಟ ದಿನ ಒಂಭತ್ತು ಗಂಟೆಗೆ ಶುರುವಾಗಿ resignation letter ಕೊಟ್ಟ ಮೇಲೆ notice period ನೊಂದಿಗೆ ಮುಗಿಯಲಿಕ್ಕೆ! ಅದು ಕ್ರಮೇಣವಾಗಿ ಬೆಳೆದಿತ್ತು.. ಈಗ ನಿಧಾನವಾಗಿ ಸತ್ತಿದೆ. ಮಣ್ಣುಮಾಡುವ ಸಮಯ.


ಯಾರು ಸರಿ? ಯಾರದು ತಪ್ಪಿತ್ತು? ಏನು ಮಾಡಿದರೆ ಸಂಬಂಧ ಉಳಿಯುತ್ತಿತ್ತು? - ಇವೆಲ್ಲ ಚರ್ಚೆಗಳು, ಪ್ರಶ್ನೆಗಳು ಅನವಶ್ಯಕ - ಸಂಬಂಧ ಸಾವಿನ postmortem report ತೆಗೆದುಕೊಂಡು ಏನು ಮಾಡಲಾಗುತ್ತದೆ; ಮತ್ತೆ ಬದುಕಿಸಲು ಹೇಗೂ ಸಾಧ್ಯವಿಲ್ಲ. ಇನ್ನೊಂದು ಸಂಬಂಧ ಹೀಗೆ ಸಾಯದಂತೆ ಮುನ್ನೆಚ್ಚರಿಕೆಗೆ ಈ data ಉಪಯೋಗಿಸುತ್ತೀರಾ? That's funny. ಪ್ರತಿ ಸಂಬಂಧ ಕೂಡ ನಮ್ಮ ಹೆಬ್ಬೆರಳಿನ ಗುರುತಿನಂತೆ; ಪ್ರತಿಯೊಂದಕ್ಕೂ ತನ್ನದೇ ಗಾತ್ರ, ಆಕಾರ, ಡೊಂಕು, ತಿರುವು.. ಒಂದು ಪರಿಹಾರವನ್ನು ಇನ್ನೊಂದು ಸಮಸ್ಯೆಗೆ ಹೇಗೆ ಬಳಸುತ್ತೀರಿ! It's one-to-one relationship. ಸಾಧ್ಯವಿದ್ದರೆ ಸಂಬಂಧ ಬದುಕ್ಕಿದ್ದಾಗ ಕಳೆದ ಸಂತಸದ ಕ್ಷಣಗಳನ್ನು ನೆನೆಯಬಹುದು. ಅದೂ ಸಾಧ್ಯವಾಗದಿದ್ದರೆ.. let silence speak.


ಗೆರೆ ಗೀಚಿ "ಇಂದಿನಿಂದ ನನ್ನ ನಿನ್ನ ನಡುವೆ ಯಾವ ಸಂಬಂಧವೂ ಇಲ್ಲ.. ನೀನು ನನ್ನ ಪಾಲಿಗೆ ಸತ್ತೆ" ಎಂದು ಹಳೆಯ ಸಿನಿಮಾದಲ್ಲಿ ಅಪ್ಪ ಮಗನಿಗೆ ಹೇಳಿದಂತೆ ಹೇಳಬೇಕಿಲ್ಲ, ಹೇಳಲಾರೆವು. Let's learn to avoid. ಮುಂಚೆ ಬಡ ನಗೆಹನಿ (Poor joke!!)ಗೆ LOL.. ROFL.. ಅಂತ reply ಮಾಡುವ ಜಾಗೆಯಲ್ಲಿ ಒಳ್ಳೆ ಜೋಕಿಗೂ ಒಂದು ಚಿಕ್ಕ ಸ್ಮೈಲೀ.. Sure ಅನ್ನುವ ಜಾಗದಲ್ಲಿ 'Ok'.. ಇವೆಲ್ಲವನ್ನೂ ಅರ್ಥಮಾದಿಕೊಳ್ಳಲಾಗದಿದ್ದಷ್ಟು insensitive ಇದ್ದರೆ ಒಂದು ಸೂಕ್ಷ್ಮ ವಿದಾಯ.


ಸಂಬಂಧಗಳಲ್ಲಿ ಒಪ್ಪಿಸುವುದು, ಕಾಪಾಡಿಕೊಳ್ಳಲು ಪ್ರಯತ್ನ ಪಡುವುದು ಇವೆಲ್ಲ ಕೂಡ stupidity ಅನ್ನಿಸುತ್ತವೆ. ಭಾವನೆಗಳನ್ನು ಮತ್ತೊಬ್ಬರು sense ಮಾಡಿಕೊಳ್ಳಬೇಕು, explain ಮಾಡಲಾಗುವುದಿಲ್ಲ. ಹಾಗೆ explain ಮಾಡುವ convince ಮಾಡುವ ಹಂತ ತಲುಪಿದೆಯೆಂದರೆ ಅದರರ್ಥ ಸಂಬಂಧ ಸಾಯಲು ಅಣಿಯಾಗುತ್ತಿದೆ. ಹಾಗೆ explain, convince ಮಾಡಿದರೂ ಅದು ಆಕಡೆಯ ವ್ಯಕ್ತಿಗೆ ಅರ್ಥವಾಗುತ್ತಿಲ್ಲವೆಂದರೆ ಆ ಸಂಬಂಧ ಸತ್ತಿದೆ. Let's not force it to remain alive. It can't, at least for a long time. Let it die peacefully. Let's bid goodbye.

ಎಲ್ಲ ದುಃಖಗಳಿಗೂ ಕೊನೆಇರುವುದಿಲ್ಲ; ಬಹಳಷ್ಟು ಅಭ್ಯಾಸವಾಗಿಬಿಡುತ್ತವೆ. ಅದೇ ನಮ್ಮ norm ಆಗಿಹೋಗುತ್ತದೆ. What cannot be cured should be endured! ಇಷ್ಟೆಲ್ಲ ಹೇಳಿದ ಮೇಲೂ ಕೆಲವು exceptionಗಳು ಉಳಿಯುತ್ತವೆ. ಎಲ್ಲ ಸತ್ತ ಸಂಬಂಧಗಳಿಗೂ ವಿದಾಯ ಹೇಳಲಾಗುವುದಿಲ್ಲ. ಏನು ಮಾಡಬೇಕು? Simple, ಅನುಭವಿಸಬೇಕು!!

 
 
 

Recent Posts

See All
Let's Compare. Let's Complicate.

‘Who do you think is happier? Human beings or animals?’ asked my friend randomly. I don’t know why he gets such strange doubts. The...

 
 
 
Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
© 2023 by Andy Decker. Proudly created with WIX.COM
bottom of page